ಬಾಳ ಠಾಕ್ರೆ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಈ ಅನನ್ಯ ಕಲಾವಿದ
ನಿಮ್ಮ ಪ್ರಕಾರ ಈ ಪಾತ್ರಕ್ಕೆ ಯಾವ ನಟ ಸೂಕ್ತ?
ಮುಂಬೈ,ಡಿ.15: ಶಿವಸೇನಾ ಸಂಸ್ಥಾಪಕ ಬಾಳಠಾಕ್ರೆಯ ಜೀವನಾಧಾರಿತ ಸಿನೆಮಾ ಬರಲಿದ್ದು, ನವಾಝುದ್ದೀನ್ ಸಿದ್ದೀಕಿ ಮುಖ್ಯಪಾತ್ರ ನಿರ್ವಹಿಸಲಿದ್ದಾರೆ ಎಂದು ಡಿಎನ್ಎ ಪತ್ರಿಕೆ ವರದಿ ಮಾಡಿದೆ. ಈ ಚಿತ್ರದಲ್ಲಿ ನವಾಝುದ್ದೀನ್ ಬಾಳಠಾಕ್ರೆ ಪಾತ್ರ ಮಾಡುತ್ತಿದ್ದಾರೆಎಂದು ಹೇಳಲಾಗಿದೆ. ಡಿಸೆಂಬರ್ 21ಕ್ಕೆ ಈ ವಿಷಯದಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ. ಇದೇ ವೇಳೆ ವರದಿಯ ಕುರಿತು ನವಾಝುದ್ದೀನ್ ಸಿದ್ದೀಕಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಶಿವಸೇನೆ ವಕ್ತಾರ ಮತ್ತು ಸಂಸದ ಸಂಜಯ್ ರಾವತ್ ಚಿತ್ರಕಥೆ ರಚಿಸಿದ್ದಾರೆ. ಚಿತ್ರದ ಕುರಿತಂತೆ ಪತ್ರಕರ್ತರು ಕೇಳಿದ ಪ್ರೆಶ್ನೆಗೆ ರಾವತ್, 21ರಂದು ನಡೆಯುವ ಕಾರ್ಯಕ್ರಮಕ್ಕೆ ಬನ್ನಿರಿ. ಈಗ ಏನನ್ನೂ ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
Next Story