ಪಂಜಾಬ್: ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ
ಚಂಡೀಗಢ, ಡಿ.17: ಅಮೃತಸರ, ಜಲಂಧರ್ ಹಾಗು ಪಟಿಯಾಲ ಪುರಸಭಾ ನಿಗಮಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರೂ ಸ್ಥಾನಗಳನ್ನು ಗೆದ್ದಿದೆ. ಶಿರೋಮಣಿ ಅಕಾಲಿದಳ ಹಾಗು ಬಿಜೆಪಿ ಮೆಷಿನ್ ಗಳ ದುರುಪಯೋಗ ನಡೆದಿದೆ ಎಂದು ಆರೋಪಿಸಿದೆ.
ಮೂರು ಪುರಸಭೆಗಳ ವಾರ್ಡ್ ಗಳಲ್ಲಿ ಕಾಂಗ್ರೆಸ್ ಎಲ್ಲಾ ಸ್ಥಾನಗಳನ್ನು ಗೆದ್ದಿದ್ದು, ಅಮರೀಂದರ್ ಸಿಂಗ್ ನೇತೃತ್ವದ ಸರಕಾರಕ್ಕೆ ಬಹುದೊಡ್ಡ ಮುನ್ನಡೆಯಾಗಿದೆ.
ಭಾರೀ ಭಿಗಿ ಭದ್ರತೆಯೊಂದಿಗೆ 29 ಮುನಿಸಿಪಲ್ ಕೌನ್ಸಿಲ್ ಗಳಿಗೆ ಹಾಗು ನಗರ ಪಂಚಾಯತ್ ಗಳಿಗೆ ಇಂದು ಚುನಾವಣೆ ನಡೆದಿದೆ, ಮೂರು ಪುರಸಭಾ ನಿಗಮಗಳಲ್ಲಿ ಪಟಿಯಾಲದಲ್ಲಿ ಅತೀ ಹೆಚ್ಚು ಮತದಾನವಾಗಿದೆ.
Next Story