ಹಿಮಾಚಲ ಪ್ರದೇಶ ಚುನಾವಣೆ: ಬಿಜೆಪಿಯ ಸಿಎಂ ಅಭ್ಯರ್ಥಿ ಪ್ರೇಮ್ ಕುಮಾರ್ ಗೆ ಸೋಲು
ಹಿಮಾಚಲ ಪ್ರದೇಶ, ಡಿ.18: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸಿರುವುದು ಸ್ಪಷ್ಟವಾಗಿದ್ದರೂ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ರ ಸೋಲು ಪಕ್ಷಕ್ಕೆ ಹಿನ್ನಡೆಯಾಗಿದೆ.
ಸುಜನ್ ಪುರ್ ನಲ್ಲಿ ಸ್ಪರ್ಧಿಸಿದ್ದ ಧುಮಾಲ್ ಕಾಂಗ್ರೆಸ್ ನ ರಾಜೀಂದರ್ ರಾಣಾ ವಿರುದ್ಧ ಸೋಲನುಭವಿಸಿದ್ದಾರೆ. ಚುನಾವಣೆಗೆ ಮುನ್ನವೇ ಪ್ರೇಂ ಕುಮಾರ್ ಧುಮಾಲ್ ರನ್ನು ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ಘೋಷಿಸಿತ್ತು. ಆದರೆ ಇದೀಗ ಅವರ ಸೋಲಿನಿಂದ ಪಕ್ಷಕ್ಕೆ ಮುಖಭಂಗವಾಗಿದೆ.
Next Story