ಮೋದಿ ತವರು ಕ್ಷೇತ್ರದಲ್ಲಿ ಸೋಲುಂಡ ಬಿಜೆಪಿ ಅಭ್ಯರ್ಥಿ
ಗುಜರಾತ್ ಚುನಾವಣೆ
ಗುಜರಾತ್, ಡಿ.18: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ ತವರಾದ ವಡ್ನಗರ್ ಒಳಗೊಂಡಿರುವ ಉಂಝಾದಲ್ಲಿ ಸೋಲನುಭವಿಸಿದೆ.
ಪಾಟಿದಾರ್ ಸಮುದಾಯದ ಮಂದಿಯೇ ಹೆಚ್ಚಿರುವ ಇಲ್ಲಿ ಕಾಂಗ್ರೆಸ್ ನ ಆಶಾ ಪಟೇಲ್ ಬಿಜೆಪಿಯ ಪಟೇಲ್ ನಾರಾಯಣ್ ಭಾಯ್ ಅವರನ್ನು 19,500 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಆಶಾ ಪಟೇಲ್ 81,797 ಮತಗಳನ್ನು ಗಳಿಸಿದ್ದರೆ ನಾರಾಯಣ್ ಭಾಯ್ 62,268 ಮತಗಳನ್ನು ಗಳಿಸಿದ್ದರು.
ನವಸರ್ಜನ್ ಯಾತ್ರೆಯ ಸಂದರ್ಭ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಊಂಝಾದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು. ವಡ್ನಗರ್ ಸಮೀಪದ ಉಮಿಯಾ ಮಠ ದೇವಸ್ಥಾನಕ್ಕೂ ತೆರಳಿದ್ದ ರಾಹುಲ್ ಪ್ರಾರ್ಥನೆ ನಡೆಸಿದ್ದರು,
Next Story