ಉತ್ತರ ಪ್ರದೇಶದ ಝೆರಾಕ್ಸ್ ಅಂಗಡಿಯಲ್ಲಿ ಸೇನಾ ನಕಾಶೆಗಳು ಪತ್ತೆ !
ಸಾಂದರ್ಭಿಕ ಚಿತ್ರ
ಬರೇಲಿ(ಉ.ಪ್ರ),ಜ.21: ಇಲ್ಲಿಯ ಝೆರಾಕ್ಸ್ ಅಂಗಡಿಯೊಂದರಲ್ಲಿ ಸೇನೆಗೆ ಸಂಬಂಧಿಸಿದ ನಕಾಶೆಗಳು ಶನಿವಾರ ಪತ್ತೆಯಾಗಿದ್ದು, ಅಂಗಡಿಯ ಮಾಲಕನನ್ನು ಸೇನೆಯ ಗುಪ್ತಚರ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಇಬ್ಬರು ಯುವಕರು ಈ ನಕಾಶೆಗಳನ್ನು ತಂದಿದ್ದು, ನಂತರ ಅವುಗಳನ್ನು ಮತ್ತು ಝೆರಾಕ್ಸ್ ಪ್ರತಿಗಳನ್ನು ಪಡೆಯುವುದಾಗಿ ತಿಳಿಸಿದ್ದರು ಎನ್ನುವುದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಇದರ ಬೆನ್ನಲ್ಲೇ ಅಂಗಡಿಗೆ ದಾಳಿ ನಡೆಸಿ ನಕಾಶೆಗಳನ್ನು ಪತ್ತೆ ಹಚ್ಚಿದ ಸೇನೆಯ ಗುಪ್ತಚರ ಅಧಿಕಾರಿಗಳು ಅಂಗಡಿಯ ಮಾಲಿಕ ಕೃಷ್ಣ ಅಗರವಾಲ್ನನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ ಎಂದರು.
ಈ ವಿಷಯವು ಸೇನೆಗೆ ಸಂಬಂಧಿಸಿದ್ದು, ಅದು ಈವರೆಗೆ ಪೊಲೀಸರೊಂದಿಗೆ ಯಾವುದೇ ಮಾಹಿತಿಗಳನ್ನು ಹಂಚಿಕೊಂಡಿಲ್ಲ ಎಂದು ಬರೇಲಿಯ ಎಸ್ಎಸ್ಪಿ ಜೋಗೇಂದ್ರ ಕುಮಾರ ಅವರು ಸುದ್ದಿಗಾರರಿಗೆ ತಿಳಿಸಿದರು.
Next Story