ಸರಕಾರಿ ಶಾಲೆ ಗೇಟಿನ ಸಮೀಪ ಬಾಂಬ್ ಪತ್ತೆ
ಗಯಾ, ಫೆ. 19: ಬಿಹಾರದ ಗಯಾ ಜಿಲ್ಲೆಯ ಪರಾಯಿಯ ಸರಕಾರಿ ಶಾಲೆಯ ಗೇಟ್ ಸಮೀಪ ಸೋಮವಾರ ಎರಡು ಬಾಂಬ್ಗಳು ಪತ್ತೆಯಾಗಿವೆ. ಮಂಝಾರ್ ಗ್ರಾಮದ ಶಾಲೆಯೊಂದರ ಗೇಟಿನ ಸಮೀಪ ಪ್ರಬಲ ಬಾಂಬ್ ಪತ್ತೆಯಾದ ದಿನದ ಬಳಿಕ ಈ ಬಾಂಬ್ ಪತ್ತೆಯಾಗಿದೆ.
ವಿದ್ಯಾರ್ಥಿಗಳು ಮಾಹಿತಿ ನೀಡಿದ ಬಳಿಕ ಶಾಲಾ ಗೇಟ್ನ ಸಮೀಪ ಸಂಶಯಾಸ್ಪದ ವಸ್ತು ಇದೆ ಎಂದು ಶಾಲೆಯ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಶಶಸ್ತ್ರ ಸೀಮಾ ಬಲದ ಯೋಧರೂ ಶಾಲೆಗೆ ದಾವಿಸಿ ಸಂಶಯಾಸ್ಪದ ವಸ್ತುವನ್ನು ಪರಿಶೀಲಿಸಿದರು. ಅನಂತರ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿದರು. ಜನವರಿಯಲ್ಲಿ ಬುದ್ಧಗಯಾದ ಮಹಾಬೋಧಿ ದೇವಾಲಯದ ಸಮೀಪ ಎರಡು ಸಜೀವ ಬಾಂಬ್ ಅನ್ನು ಪತ್ತೆಹಚ್ಚಲಾಗಿತ್ತು.
Next Story