ರಾಜಸ್ಥಾನದ ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ನಿಧನ
ರಾಜಸ್ಥಾನ, ಫೆ.21: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ಉದಯ್ ಪುರದ ಜಿಬಿಎಚ್ ಅಮೆರಿಕನ್ ಆಸ್ಪತ್ರೆಯಲ್ಲಿ ಇಂದು ನಿಧನರಾದರು.
ರಾಜಸ್ಥಾನದ ನಾಥ್ ದ್ವಾರದ ಶಾಸಕರಾದ ಕಲ್ಯಾಣ್ ಸಿಂಗ್ ಕಳೆದ ಮೂರು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಮಂಗಳವಾರ ರಾತ್ರಿ ಅವರ ಆರೋಗ್ಯ ಹದಗೆಟ್ಟಿದ್ದು, ಉದಯ್ ಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ನಿಧನಕ್ಕೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story