ಭಾರತದಲ್ಲಿ ಮೊದಲ 5ಜಿ ತಂತ್ರಜ್ಞಾನದ ಪರೀಕ್ಷೆ ಯಶಸ್ವಿ
ಹೊಸದಿಲ್ಲಿ, ಫೆ.24: ಚೀನಾದ ದೈತ್ಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳಲ್ಲೊಂದಾದ ಹುವಾಯ್ ಟೆಕ್ನಾಲಜೀಸ್ ಮತ್ತು ಭಾರತಿ ಏರ್ ಟೆಲ್ ಶುಕ್ರವಾರ ಭಾರತದಲ್ಲಿ ನಡೆಸಿದ ಮೊದಲ 5 ಜಿ ತಂತ್ರಜ್ಞಾನದ ಪರೀಕ್ಷೆ ಯಶಸ್ವಿಯಾಗಿದೆ.
ಗುರುಗ್ರಾಮದ ಮನೇಸರ್ ನಲ್ಲಿರುವ ಏರ್ ಟೆಲ್ ನೆಟ್ ವರ್ಕ್ ಕೇಂದ್ರದಲ್ಲಿ ನಡೆಸಿದ ಮೊದಲ 5 ಜಿ ತಂತ್ರಜ್ಞಾನದ ಪರೀಕ್ಷೆ ಯಶಸ್ವಿಯಾಗಿದೆ.5ಜಿ ತಂತ್ರಜ್ಞಾನ ಸೇವೆ ಆರಂಭಕ್ಕೆ ಹೆಜ್ಜೆ ಇರಿಸಿದ್ದೇವೆ. ನಮ್ಮ ಸಹಭಾಗಿತ್ವ ಸಂಸ್ಥೆ ಹುವಾಯ್ ಟೆಕ್ನಾಲಜೀಸ್ ಯೊಂದಿಗೆ ಈ ಬಗ್ಗೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಭಾರತಿ ಏರ್ ಟೆಲ್ ನೆಟ್ ವರ್ಕ್ಸ್ ನಿರ್ದೇಶಕರಾದ ಅಭಯ್ ಸಾವರ್ಗಾಂವ್ಕರ್ ತಿಳಿಸಿದ್ದಾರೆ.
Next Story