ಇಂಜಿನ್ ವಿಫಲ: ಅಹ್ಮದಾಬಾದ್ಗೆ ಹಿಂದಿರುಗಿದ ಇಂಡಿಗೊ ವಿಮಾನ
ಮುಂಬೈ, ಮಾ. 12: ಇಂಜಿನ್ ವಿಫಲವಾದ ಹಿನ್ನೆಲೆಯಲ್ಲಿ ಲಕ್ನೋ ತೆರಳುತ್ತಿದ್ದ ಇಂಡಿಗೋ ವಿಮಾನ ಅಹ್ಮದಾಬಾದ್ಗೆ ಹಿಂದಿರುಗಿದ ಘಟನೆ ಸೋಮವಾರ ನಡೆದಿದೆ. 186 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಏರ್ಬಸ್ ಎ320 ಅಹ್ಮದಾಬಾದ್ನಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಅಹ್ಮದಾಬಾದ್ ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್ ಗಂಗಾಲ್ ತಿಳಿಸಿದ್ದಾರೆ. ಇಂಜಿನ್ ವಿಫಲವಾದ ಬಳಿಕ ಪ್ರಾಟ್ ಆ್ಯಂಡ್ ವಿಟ್ಟಿ ನಿಯೋ ಇಂಜಿನ್ ಹೊಂದಿರುವ ವಿಮಾನ ಅಹ್ಮದಾಬಾದ್ಗೆ ಹಿಂದಿರುಗಿತು ಎಂದು ಅವರು ಹೇಳಿದ್ದಾರೆ. ಸುಮಾರು ಬೆಳಗ್ಗೆ 9:38ಕ್ಕೆ ವಿಮಾನದ ಇಂಜಿನ್ ವಿಫಲವಾದ ಬಗ್ಗೆ ಪೈಲೆಟ್ ವರದಿ ಮಾಡಿದರು ಹಾಗೂ ವಿಮಾನವನ್ನು ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಹಿಂದೆ ತರಲು ಮನವಿ ಮಾಡಿದರು ಎಂದು ಗಂಗಾಲ್ ಹೇಳಿದ್ದಾರೆ. ಈ ಸಂದರ್ಭ ವಿಮಾನ ಸುರಕ್ಷಿತವಾಗಿ ಇಳಿಯಲು ಸಂಪೂರ್ಣ ತುರ್ತು ಸ್ಥಿತಿ ಘೋಷಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
Next Story