ಕಾಶ್ಮೀರ: ಉಗ್ರರೊಂದಿಗೆ ಕಾಳಗದಲ್ಲಿ ಯೋಧ ಸಾವು, ಘರ್ಷಣೆಗೆ ಮೂವರು ನಾಗರಿಕರ ಬಲಿ
ಶ್ರೀನಗರ,ಎ.11: ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದರೆ, ನಂತರ ಭದ್ರತಾ ಪಡೆಗಳೊಂದಿಗೆ ಸ್ಥಳೀಯರ ಘರ್ಷಣೆಗಳಲ್ಲಿ ಇಬ್ಬರು ಹದಿಹರೆಯದವರು ಸೇರಿದಂತೆ ಮೂವರು ನಾಗರಿಕರು ಬಲಿಯಾಗಿದ್ದಾರೆ.
ಜಿಲ್ಲೆಯ ಖುದ್ವಾನಿ ಪ್ರದೇಶದಲ್ಲಿ ಉಗ್ರರು ಬಚ್ಚಿಟ್ಟುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಪಡೆದಿದ್ದ ಭದ್ರತಾ ಪಡೆಗಳು ಮಂಗಳವಾರ ರಾತ್ರಿ ಪ್ರದೇಶವನ್ನು ನಿರ್ಬಂಧಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ನಸುಕಿನ ವೇಳೆ ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಈ ಪೈಕಿ ಓರ್ವರು ನಂತರ ಕೊನೆಯುಸಿರೆಳೆದರು.
ಭದ್ರತಾ ಪಡೆಗಳ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಲು ಪ್ರಯತ್ನಿಸಿದ್ದ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು, ಈ ಸಂದರ್ಭ ನಡೆದ ಘರ್ಷಣೆಗಳಲ್ಲಿ ಸಾರ್ಜೀಲ್ ಅಹ್ಮದ್(25), ಫೈಸಲ್ ಇಲಾಹಿ(14) ಮತ್ತು ಬಿಲಾಲ್ ಅಹ್ಮದ್(16) ಎನ್ನುವವರು ತೀವ್ರವಾಗಿ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇತರ 20 ನಾಗರಿಕರು ಗಾಯಗೊಂಡಿದ್ದಾರೆ.
Next Story