ವಿದ್ಯಾರ್ಥಿನಿಯ ಮೇಲೆ ವೀರ್ಯ ತುಂಬಿದ ಬಲೂನ್ ಎಸೆದ ಪ್ರಕರಣ: ಫೊರೆನ್ಸಿಕ್ ವರದಿ ಹೇಳಿದ್ದೇನು?
ಹೊಸದಿಲ್ಲಿ, ಎ18: ತನ್ನ ಮೇಲೆ ವೀರ್ಯ ತುಂಬಿದ ಬಲೂನ್ ಎಸೆಯಲಾಗಿತ್ತು ಎಂದು ಕೆಲ ದಿನಗಳ ಹಿಂದೆ ಆರೋಪಿಸಿದ್ದ ವಿದ್ಯಾರ್ಥಿನಿಯ ಬಟ್ಟೆಯನ್ನು ಫೊರೆನ್ಸಿಕ್ ತಪಾಸಣೆಗೊಳಪಡಿಸಲಾಗಿದ್ದು, ಬಲೂನ್ ನಲ್ಲಿ ವೀರ್ಯ ಇರಲಿಲ್ಲ ಎಂದು ವರದಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ತನ್ನ ಮೇಲೆ ವೀರ್ಯ ತುಂಬಿದ ಬಲೂನನ್ನು ಎಸೆಯಲಾಗಿತ್ತು ಎಂದು ವಿದ್ಯಾರ್ಥನಿಯೊಬ್ಬರು ಆರೋಪಿಸಿದ್ದರು. ಆಕೆಯ ದೂರಿನ ಹಿನ್ನೆಲೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಫೋರೆನ್ಸಿಕ್ ಪರೀಕ್ಷೆಗೆ ಆಕೆಯ ಬಟ್ಟೆಯನ್ನು ಕಳುಹಿಸಲಾಗಿತ್ತು. ಎರಡು ತಿಂಗಳ ನಂತರ ಇದೀಗ ಬಲೂನ್ ನಲ್ಲಿ ವೀರ್ಯ ಇರಲಿಲ್ಲ ಎಂದು ಫೊರೆನ್ಸಿಕ್ ವರದಿ ತಿಳಿಸಿದೆ.
ಬಲೂನ್ ನೊಳಗೆ ಇದ್ದದ್ದೇನು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.
Next Story