ಅಸ್ಸಾಂ: 7 ವರ್ಷದ ಬಾಲಕಿಯ ಅತ್ಯಾಚಾರ
ಟಿನ್ಸುಕಿಯಾ: ಏಳು ವರ್ಷದ ಬಾಲಕಿಯ ಮೇಲೆ ಮಧ್ಯವಯಸ್ಸಿನ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ ಘಟನೆ ಟಿನ್ಸುಕಿಯಾದ ಲಾಜೋಂಗ್ ಗ್ರಾಮದಲ್ಲಿ ವರದಿಯಾಗಿದೆ.
ಕೆಲವು ದಿನಗಳ ಹಿಂದೆ ನನ್ನ ಏಳು ವರ್ಷ ವಯಸ್ಸಿನ ಪುತ್ರಿಯನ್ನು ನೆರೆಯ ಐನುಲ್ ಹಕ್ ಮನೆಯಿಂದ ಹೊರಗೆ ಕರೆದುಕೊಂಡು ಹೋದ ಹಾಗೂ ಅತ್ಯಾಚಾರ ಎಸಗಿದ ಎಂದು ಬಾಲಕಿಯ ತಂದೆ ದಾಖಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ.
ಬಾಲಕಿಯ ತಾಯಿ ನಿನ್ನೆ ಸಂಜೆ ಘಟನೆ ಬಗ್ಗೆ ನನಗೆ ಮಾಹಿತಿ ನೀಡಿದರು. ನಾನು ಕೂಡಲೇ ನೆರೆಹೊರೆಯವರಿಗೆ ತಿಳಿಸಿದೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ. ಸ್ಥಳೀಯರು ಹಕ್ನನ್ನು ಆತನ ಮನೆಯಿಂದ ವಶಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ಅನಂತರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story