ಕೊತ್ಖಾಯ್ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ
ಶಿಮ್ಲ, ಎ.25: ಶಿಮ್ಲದ ಕೊತ್ಖಾಯ್ ಎಂಬಲ್ಲಿ 16 ವರ್ಷದ ಶಾಲಾ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣದ ಆರೋಪಿಗೆ ಮೇ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶಾಲೆಯಿಂದ ಮನೆಗೆ ಮರಳುತ್ತಿದ್ದ 16ರ ಹರೆಯದ ಶಾಲಾ ಬಾಲಕಿ ಕಳೆದ ವರ್ಷದ ಜುಲೈ 4ರಿಂದ ನಾಪತ್ತೆಯಾಗಿದ್ದಳು. ಎರಡು ದಿನದ ಬಳಿಕ ಆಕೆಯ ಮೃತದೇಹವನ್ನು ಕೊತ್ಖಾಯ್ ಬಳಿಯ ಹಲಾಲಿಯ ಅರಣ್ಯಪ್ರದೇಶದಲ್ಲಿ ಪೊಲೀಸರು ಪತ್ತೆಹಚ್ಚಿದ್ದರು.ಪ್ರಕರಣಕ್ಕೆ ಸಂಬಂಧಿಸಿ ಜುಲೈ 13ರಂದು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ತನಿಖೆಯಲ್ಲಿ ಇವರ ಅಪರಾಧವನ್ನು ಸಾಬೀತುಪಡಿಸುವ ಯಾವುದೇ ಪುರಾವೆ ಲಭ್ಯವಾಗದ ಕಾರಣ ಇವರನ್ನು ಬಿಡುಗಡೆಗೊಳಿಸಲಾಗಿತ್ತು.
ಈ ಮಧ್ಯೆ , ತಲೆತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿ ಅನಿಲ್ ಕುಮಾರ್ ಎಂಬಾತನನ್ನು ಎಪ್ರಿಲ್ 23ರಂದು ಪೊಲೀಸರು ಬಂಧಿಸಿದ್ದರು. ಇದುವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗೆ ಇದೀಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
Next Story