ಎ.28ರಿಂದ ಬ್ಯಾಂಕ್ ಗಳಿಗೆ ಸರಣಿ ರಜೆ
ಹೊಸದಿಲ್ಲಿ, ಎ.27: ಎಪ್ರಿಲ್ 28ರಿಂದ ಮೇ 1ರವರೆಗೆ ಬ್ಯಾಂಕ್ಗಳಿಗೆ ಸರಣಿ ರಜೆ ಇರುವುದರಿಂದ ಎಟಿಎಂಗಳಲ್ಲಿ ಗ್ರಾಹಕರ ನೂಕುನುಗ್ಗಲು ಉಂಟಾಗುವ ಸಾಧ್ಯತೆಯಿದೆ.
ಶನಿವಾರ (ಎ.28)ನಾಲ್ಕನೇ ಶನಿವಾರ, ಎ.29 ರವಿವಾರದ ಪ್ರಯುಕ್ತ ರಜೆ, ಎ.30ರಂದು ಬುದ್ಧ ಪೂರ್ಣಿಮಾದ ಪ್ರಯುಕ್ತ ರಜೆ, ಮೇ 1ರಂದು ಕಾರ್ಮಿಕ ದಿನಾಚರಣೆ ಪ್ರಯುಕ್ತ ಸರಕಾರಿ ರಜೆ ಇರುತ್ತದೆ. ಈ ನಾಲ್ಕು ದಿನ ಬ್ಯಾಂಕ್ಗಳು ವ್ಯವಹಾರ ನಡೆಸದಿದ್ದರೂ ನೆಟ್ಬ್ಯಾಂಕಿಂಗ್ ಹಾಗೂ ಎಟಿಎಂಗಳು ಕಾರ್ಯನಿರ್ವಹಿಸುತ್ತವೆ. ಅಲ್ಲದೆ ಎಟಿಎಂಗಳಲ್ಲಿ ಸಾಕಷ್ಟು ಹಣ ಲಭ್ಯವಾಗಿಸುವ ನಿಟ್ಟಿನಲ್ಲಿ ಬ್ಯಾಂಕ್ಗಳು ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಕೆಲವು ಬ್ಯಾಂಕ್ಗಳಲ್ಲಿ ಎ.30 ಹಾಗೂ ಮೇ 1ರ ರಜೆ ವಿನಿಮಯ ರಜೆ(ಸಿಬ್ಬಂದಿಗಳಿಗೆ ಮತ್ತೊಂದು ದಿನ ರಜೆ ಪಡೆಯುವ ಸೌಲಭ್ಯ)ಯಾಗಿರುತ್ತದೆ.
Next Story