ಜಯಂತ್ ಪಾಟೀಲ್ ಎನ್ಸಿಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ
ಪುಣೆ, ಎ.29: ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ)ಯ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ, ರಾಜ್ಯದ ಮಾಜಿ ಗೃಹ ಸಚಿವ ಜಯಂತ್ ಪಾಟೀಲ್ರನ್ನು ಆಯ್ಕೆ ಮಾಡಲಾಗಿದೆ.
ಪಕ್ಷದ ಅಧ್ಯಕ್ಷ ಶರದ್ ಪವಾರ್ ನಿವಾಸದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪಾಟೀಲ್ ಹೆಸರನ್ನು ಘೋಷಿಸಲಾಯಿತು. ಹಾಲಿ ಅಧ್ಯಕ್ಷ ಸುನಿಲ್ ಟಟ್ಕರೆ ಅವರ ಸ್ಥಾನದಲ್ಲಿ ಪಾಟೀಲ್ ಕಾರ್ಯನಿರ್ವಹಿಸಲಿದ್ದಾರೆ. ಶರದ್ ಪವಾರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಜಯಂತ್ ಪಾಟೀಲ್ ಆಯ್ಕೆ ಅವಿರೋಧವಾಗಿ ನಡೆಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
Next Story