ಕವೀಂದರ್ ಗುಪ್ತಾ ಜಮ್ಮು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ
ಶ್ರೀನಗರ, ಎ.30: ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯ ಮಂತ್ರಿಯಾಗಿ ಕವೀಂದರ್ ಗುಪ್ತಾ ಇಂದು ಪ್ರಮಾಣವಚನ ಸ್ವೀಕರಿಸಿ, ಅಧಿಕಾರ ವಹಿಸಿಕೊಂಡರು.
ಪಿಡಿಪಿ-ಬಿಜೆಪಿ ಸರಕಾರದಲ್ಲಿ ಉಪ ಮುಖ್ಯ ಮಂತ್ರಿಯಾಗಿದ್ದ ನಿರ್ಮಲ್ ಸಿಂಗ್ ಅವರು ರಾಜೀನಾಮೆಯಿಂದಾಗಿ ತೆರವಾಗಿದ್ದ ಉಪಮುಖ್ಯ ಮಂತ್ರಿ ಸ್ಥಾನಕ್ಕೆ ಕವೀಂದರ್ ಗುಪ್ತಾ ಆಯ್ಕೆ ನೇಮಕಗೊಂಡಿದ್ದರು. ಕವೀಂದರ್ ಅವರು ಈ ಮೊದಲು ವಿಧಾನ ಸಭೆಯ ಸ್ವೀಕರ್ ಆಗಿದ್ದರು.
ಕವಿಂದರ್ ಗುಪ್ತಾ ಜೊತೆ ಏಳು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
Next Story