ನಾಲ್ಕರ ಹರೆಯದ ಬಾಲಕಿಯ ಅತ್ಯಾಚಾರ
ಕೇಂದ್ರಪಾಡಾ,ಎ.30: ಕೇಂದ್ರಪಾಡಾ ಜಿಲ್ಲೆಯ ಬರುಣದಿಹಾ ಗ್ರಾಮದಲ್ಲಿ ನಾಲ್ಕರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ ಆರೋಪದಲ್ಲಿ 45ರ ಹರೆಯದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
ಎ.24ರಂದೇ ಈ ಘಟನೆ ನಡೆದಿದ್ದರೂ,ಬಾಲಕಿಯ ತಂದೆ ರವಿವಾರ ದೂರು ದಾಖಲಿಸಿದ ಬಳಿಕವಷ್ಟೇ ಬೆಳಕಿಗೆ ಬಂದಿದೆ. ಸಂಜೆ ಆರೋಪಿ ರಂಜನ್ ನಾಯಕ್ನನ್ನು ಬಂಧಿಸಲಾಗಿದೆ.
ಬಾಲಕಿಯನ್ನು ಮತ್ತು ಆರೋಪಿಯನ್ನು ವೈದ್ಯಕೀಯ ತಪಾಸಣೆ ಗೊಳಪಡಿಸಲಾಗಿದೆ.
ಬಾಲಾಸೋರ,ಮಯೂರಭಾಂಜ್,ಗಂಜಾಂ ಮತ್ತು ಜಗತಸಿಂಗ್ ಪುರ ಜಿಲ್ಲೆಗಳು ಸೇರಿದಂತೆ ಒಡಿಶಾದ ವಿವಿಧ ಭಾಗಗಳಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಸರಣಿ ಅತ್ಯಾಚಾರಗಳು ನಡೆಯುತ್ತಿವೆ. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಇತ್ತೀಚಿಗೆ ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದು,ಸದನವು ಭಾರೀ ಕೋಲಾಹಲಕ್ಕೆ ಸಾಕ್ಷಿಯಾಗಿತ್ತು.
ತನ್ಮಧ್ಯೆ ಕಟಕ್ ಜಿಲ್ಲೆಯ ಸಾಲೇಪುರದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಆರರ ಹರೆಯದ ಬಾಲಕಿ ಆಸ್ಪತ್ರೆಯಲ್ಲಿ ಎಂಟು ದಿನಗಳ ಜೀವನ್ಮರಣ ಹೋರಾಟದ ಬಳಿಕ ರವಿವಾರ ಕೊನೆಯುಸಿರೆಳೆದಿದ್ದಾಳೆ.