ಛತ್ತೀಸ್ ಗಡದಲ್ಲಿ ನಕ್ಸಲರ ದಾಳಿಗೆ ಐವರು ಯೋಧರು ಹುತಾತ್ಮ
ಛತ್ತೀಸ್ ಗಡ, ಮೇ 20: ಛತ್ತೀಸ್ ಗಡದ ದಾಂತೆವಾಡದಲ್ಲಿ ರವಿವಾರನಕ್ಸಲರ ದುಷ್ಕೃತ್ಯಕ್ಕೆ ಐವರು ಯೋಧರು ಬಲಿಯಾದ ಘಟನೆ ವರದಿಯಾಗಿದೆ.
ಯೋಧರು ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ನಕ್ಸಲರು ಹುದುಗಿಸಿಟ್ಟಿದ್ದ ನೆಲಬಾಂಬ್ ಸ್ಪೋಟಗೊಂಡು ಐವರು ಯೋಧರು ಹುತಾತ್ಮರಾದರು. ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.
ನೆಲಬಾಂಬ್ ಸ್ಫೋಟಿಸಿ ಅಟ್ಟಹಾಸ ಮೆರೆದ ನಕ್ಸಲರ ವಿರುದ್ಧ ಯೋಧರು ಕಾರ್ಯಾಚರಣೆ ಆರಂಭಿಸಿದ್ದಾರೆ.
Next Story