ಕೇರಳದಲ್ಲಿ ‘ನಿಪಾ ವೈರಸ್’ಗೆ 11 ಬಲಿ
ಕೊಚ್ಚಿ, ಮೇ 21: ಉತ್ತರ ಕೇರಳದಲ್ಲಿ ‘ನಿಪಾ ವೈರಸ್’ ಸೋಂಕಿಗೆ ಬಲಿಯಾದವರ ಸಂಖ್ಯೆ 11ಕ್ಕೇರಿದ್ದು, ರಾಜ್ಯಾದ್ಯಂತ ಜನರು ಆತಂಕದಲ್ಲಿದ್ದಾರೆ. ಈ ಸೋಂಕಿಗೆ ತುತ್ತಾಗಿದ್ದವರಿಗೆ ಚಿಕಿತ್ಸೆ ನೀಡಿದ್ದ ನರ್ಸ್ ಒಬ್ಬರು ಪೇರಂಬ್ರ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕೋಯಿಕ್ಕೋಡ್ ನಲ್ಲಿ ಈಗಾಗಲೇ 7 ಮಂದಿ ಮೃತಪಟ್ಟಿದ್ದಾರೆ. ಮಲಪ್ಪುರಂ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಈ ಸೋಂಕಿಗೆ ಮೊದಲ ತುತ್ತಾಗಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು. ನಂತರ ವೈರಸ್ ಯಾವುದು ಎನ್ನುವುದು ತಿಳಿದುಬರದ ಕಾರಣ ರಾಜ್ಯ ಸರಕಾರವು ಕೇಂದ್ರಕ್ಕೆ ಪತ್ರ ಬರೆದಿತ್ತು. ಇದೀಗ ಈ ವೈರಸ್ ‘ನಿಪಾ’ ಎನ್ನುವುದು ದೃಢಪಟ್ಟಿದೆ. ಕೋಯಿಕ್ಕೋಡ್ ನ ವಿವಿಧ ಆಸ್ಪತ್ರೆಗಳಲ್ಲಿ 10ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story