ಗ್ವಾಲಿಯರ್: ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಬೆಂಕಿಗಾಹುತಿ
ಗ್ವಾಲಿಯರ್, ಮೇ 21: ಹೊಸದಿಲ್ಲಿಯಿಂದ ವಿಶಾಖಪಟ್ಟಣಂಗೆ ತೆರಳುತ್ತಿದ್ದ ಆಂಧ್ರಪ್ರದೇಶ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ 2 ಬೋಗಿಗಳಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ.
ಬೆಂಕಿ ಹತೋಟಿಯಲ್ಲಿದ್ದು, ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಗ್ವಾಲಿಯರ್ ನ ಬಿರ್ಲಾನಗರ್ ಸಮೀಪ ರೈಲಿನ ಬೋಗಿಗಳು ಬೆಂಕಿಗಾಹುತಿಯಾಗಿತ್ತು. ಬೆಂಕಿಗಾಹುತಿಯಾದ ಎರಡು ಬೋಗಿಗಳನ್ನು ರೈಲಿನಿಂದ ಪ್ರತ್ಯೇಕಗೊಳಿಸಲಾಗಿದೆ ಹಾಗು ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಪ್ರಕಾಶ್ ಮಾಹಿತಿ ನೀಡಿದ್ದಾರೆ.
Next Story