40 ಅಡಿ ಬಂಡೆಯಿಂದ ಸಮುದ್ರಕ್ಕೆ ಬಿದ್ದ ವಿದ್ಯಾರ್ಥಿ ಸಾವು
ಸಾಂದರ್ಭಿಕ ಚಿತ್ರ
ಮೆಲ್ಬರ್ನ್, ಮೇ 21: ಪಶ್ಚಿಮ ಆಸ್ಟ್ರೇಲಿಯದ ಪ್ರಸಿದ್ಧ ಪ್ರವಾಸಿ ಸ್ಥಳವೊಂದರಲ್ಲಿ, ಸೆಲ್ಫಿ ತೆಗೆಯುತ್ತಿರುವಾಗ ಬಂಡೆಯೊಂದರಿಂದ 40 ಅಡಿ ಕೆಳಗಿನ ಸಮುದ್ರಕ್ಕೆ ಬಿದ್ದು 20 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ.
ಐತಿಹಾಸಿಕ ಬಂದರು ಪಟ್ಟಣ ಆಲ್ಬನಿ ಸಮೀಪದ ‘ದ ಗ್ಯಾಪ್’ನಲ್ಲಿರುವ 40 ಮೀಟರ್ ಎತ್ತರದ ಬಂಡೆಯೊಂದರ ಮೇಲೆ ಅಂಕಿತ್ ಗುರುವಾರ ತನ್ನ ಸ್ನೇಹಿತರೊಂದಿಗಿದ್ದರು. ಸೆಲ್ಫಿ ಫೋಟೊ ತೆಗೆಯುತ್ತಿದ್ದ ವೇಳೆ ಅವರು ಜಾರಿ ಸಮುದ್ರಕ್ಕೆ ಬಿದ್ದರು.
ಅವರ ಶೋಧಕ್ಕೆ ರಕ್ಷಣಾ ಹೆಲಿಕಾಪ್ಟರೊಂದನ್ನು ಬಳಸಲಾಯಿತಾದರೂ, ಒಂದು ಗಂಟೆ ಬಳಿಕ ಅವರ ಮೃತದೇಹ ಪತ್ತೆಯಾಯಿತು.
Next Story