ಮಾವೋವಾದಿಗಳಿಂದ ಬಿಜೆಪಿ ಸಂಸದರ ಫಾರ್ಮ್ ಹೌಸ್ ಮೇಲೆ ಐಇಡಿ ದಾಳಿ
ಸಾಂದರ್ಭಿಕ ಚಿತ್ರ
ರಾಯ್ಪುರ, ಮೇ 23: ಮಾವೋವಾದಿಗಳು ಬಿಜೆಪಿ ಸಂಸದರೊಬ್ಬರ ಫಾರ್ಮ್ ಹೌಸ್ ಮೇಲೆ ಐಇಡಿ ಸ್ಫೋಟಕಗಳ ದಾಳಿ ನಡೆಸಿರುವ ಘಟನೆ ಛತ್ತೀಸ್ ಗಢದ ಕಂಕರ್ ಜಿಲ್ಲೆಯಲ್ಲಿ ನಡೆದಿದೆ.
ಕಂಕರ್ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ವಿಕ್ರಮ್ ಉಸೇಂದಿಯವರಿಗೆ ತನ್ನ ತವರು ಗ್ರಾಮ ಬೊದನಾರ್ ನಲ್ಲಿ ಫಾರ್ಮ್ ಹೌಸ್ ಒಂದಿತ್ತು. ದಾಳಿ ನಡೆದ ಸಂದರ್ಭ ಫಾರ್ಮ್ ಹೌಸ್ ಖಾಲಿ ಇದ್ದುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸ್ಥಳದಿಂದ ತೆರಳುವಂತೆ ಮಾವೋವಾದಿಗಳು ಫಾರ್ಮ್ ಹೌಸ್ ವಾಚ್ ಮ್ಯಾನ್ ಗೆ ಬೆದರಿಸಿದರು. ನಂತರ ಐಇಡಿ ದಾಳಿ ನಡೆಸಿದರು. ದಾಳಿಯಿಂದ ಫಾರ್ಮ್ ಹೌಸ್ ನ ಎರಡು ಕೋಣೆಗಳಿಗೆ ಹಾನಿಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story