ಐಎಎಫ್ನ ವಿಮಾನ ಪತನ
ಹೊಸದಿಲ್ಲಿ, ಮೇ 23: ಬುಧವಾರ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಭಾರತೀಯ ವಾಯು ಪಡೆಯ ಚೀತಾ ಹೆಲಿಕಾಪ್ಟರ್ ಜಮ್ಮು ಹಾಗೂ ಕಾಶ್ಮೀರದ ನಾಥಾ ಟಾಪ್ನಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನಾ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ.
ಜಮ್ಮವಿನಿಂದ ಎಂದಿನಂತೆ ಹಾರಾಟ ಆರಂಭಿಸಿದ ಹೆಲಿಕಾಪ್ಟರ್ ನಾಥಾ ಟಾಪ್ನಲ್ಲಿ ಬೆಳಗ್ಗೆ 9.50ಕ್ಕೆ ಪತನಗೊಂಡಿತು ಎಂದು ಮೂಲಗಳು ತಿಳಿಸಿವೆ. ಅಪಘಾತಕ್ಕೆ ಕಾರಣವಾದ ಅಂಶಗಳ ಬಗ್ಗೆ ನ್ಯಾಯಾಲಯ ತನಿಖೆ ಆದೇಶಿಸಿದೆ.
Next Story