ರಮಝಾನ್ ತಿಂಗಳಲ್ಲಿ ಸಹರಿ ಸಮಯ ಮುಸ್ಲಿಮರನ್ನು ಎಬ್ಬಿಸುವ ಸಿಖ್ ವ್ಯಕ್ತಿ
ಕೋಮು ಸೌಹಾರ್ದ ಸಾರುವ ವಯೋವೃದ್ಧ
ಜಮ್ಮು ಕಾಶ್ಮೀರ, ಮೇ 29: ರಮಝಾನ್ ತಿಂಗಳಲ್ಲಿ ಮುಂಜಾನೆ 4 ಗಂಟೆಯ ಸುಮಾರಿಗೆ ಹಿರಿಯ ಸಿಖ್ ವ್ಯಕ್ತಿಯೊಬ್ಬರು ಮುಸ್ಲಿಮರನ್ನು ಸಹರಿಗೆ ಎಬ್ಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವಿಡಿಯೋ ಎನ್ನಲಾಗಿದೆ. ಡೋಲು ಬಡಿಯುತ್ತಾ, ಮುಸ್ಲಿಮರನ್ನು ಸಹರಿ ಸಮಯದಲ್ಲಿ ನಿದ್ದೆಯಿಂದ ಎಬ್ಬಿಸುವ ಈ ವಿಡಿಯೋವನ್ನು ಸಾವಿರಾರು ಮಂದಿ ಶೇರ್ ಮಾಡಿದ್ದಾರೆ.
“ಪ್ರವಾದಿ ಮುಹಮ್ಮದರ ಪ್ರೀತಿಪಾತ್ರರೇ ನಿಮ್ಮ ಉಪವಾಸ ಆರಂಭಿಸಲು ಎದ್ದೇಳಿ” ಎಂದು ಅಪರಿಚಿತ ಸಿಖ್ ವಯೋವೃದ್ಧರು ಬೊಬ್ಬಿಡುತ್ತಾ ಸಾಗುವುದು ವಿಡಿಯೋದಲ್ಲಿದೆ.
ಕಾಶ್ಮೀರದಲ್ಲಿ ನೆಲೆನಿಂತಿರುವ ಕೋಮು ಸೌಹಾರ್ದತೆಗೆ ಈ ವಿಡಿಯೋ ಉದಾಹರಣೆ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಅಭಿಪ್ರಾಯಿಸಿದ್ದಾರೆ.
Next Story