ಉತ್ತರ ಪ್ರದೇಶ: ಕೈರಾನದ 73 ಬೂತ್ ಗಳಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ
ಇವಿಎಂಗಳಲ್ಲಿ ದೋಷ
ಲಕ್ನೋ,ಮೇ 29: ಸೋಮವಾರ ನಡೆದ ಉಪಚುನಾವಣೆಯಲ್ಲಿ ಹಲವು ಕಡೆ ಇವಿಎಂ-ವಿವಿಪ್ಯಾಟ್ ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕೈರಾನದ 73 ಬೂತ್ ಗಳಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗವು ಆದೇಶಿಸಿದೆ.
ವಿಪಕ್ಷಗಳು ಸೇರಿದಂತೆ ಬಿಜೆಪಿ ಪಕ್ಷವು ಇವಿಎಂಗಳಲ್ಲಿನ ತಾಂತ್ರಿಕ ಸಮಸ್ಯೆಗಳ ಬಗ್ಗೆ ಆರೋಪಿಸಿತ್ತು. ಮೇ 30ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮರುಮತದಾನ ನಡೆಯಲಿದೆ. ನಾಕುರ್ ನ 23, ಗಂಗೋಹ್ ನ 44, ಥಾನಾ ಭವನ್ ನ ಒಂದು ಹಾಗು ಶಾಮ್ಲಿಯ 5 ಮತದಾನ ಕೇಂದ್ರಗಳಲ್ಲಿ ಮರುಮತದಾನ ನಡೆಯಲಿದೆ.
ಸೋಮವಾರ ನಡೆದ ಕೈರಾನ ಕ್ಷೇತ್ರದ ಮತದಾನದಲ್ಲಿ 54 ಶೇ. ಮತದಾನವಾಗಿತ್ತು.
Next Story