ರೈತರ 10 ದಿನಗಳ ಪ್ರತಿಭಟನೆ ಆರಂಭ: ಹಾಲು, ತರಕಾರಿ ಸರಬರಾಜಿನಲ್ಲಿ ಪರಿಣಾಮ ಸಾಧ್ಯತೆ | Vartha Bharati- ವಾರ್ತಾ ಭಾರತಿ

---

ರೈತರ 10 ದಿನಗಳ ಪ್ರತಿಭಟನೆ ಆರಂಭ: ಹಾಲು, ತರಕಾರಿ ಸರಬರಾಜಿನಲ್ಲಿ ಪರಿಣಾಮ ಸಾಧ್ಯತೆ

ಹೊಸದಿಲ್ಲಿ,ಜೂ.1: ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ,ರಾಜಸ್ಥಾನ ಮತ್ತು ಹರ್ಯಾಣ ಸೇರಿದಂತೆ ಏಳು ರಾಜ್ಯಗಳಲ್ಲಿ ರೈತರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶುಕ್ರವಾರದಿಂದ ಮುಷ್ಕರವನ್ನು ಆರಂಭಿಸಿದ್ದು,ಮೊದಲ ದಿನವೇ ತಾಜಾ ತರಕಾರಿಗಳು ಮತ್ತು ಸಾವಿರಾರು ಲೀ.ಹಾಲನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದಾರೆ. ಸಂಪೂರ್ಣ ಸಾಲ ಮನ್ನಾ,ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ,ಮತ್ತು ಸರಕಾರದಿಂದ ತಮಗೆ ಕಾಯಂ ಕನಿಷ್ಠ ಆದಾಯದ ಭರವಸೆ ಬೇಡಿಕೆಗಳನ್ನು ಮುಂದಿರಿಸಿಕೊಂಡು ಈ ‘ಗಾಂವ್ ಬಂದ್’ಮುಷ್ಕರವನ್ನು ನಡೆಸಲಾಗುತ್ತಿದೆ. ರೈತರು ಮುಂದಿನ 10 ದಿನಗಳ ಕಾಲ ನಗರಗಳಿಗೆ ತರಕಾರಿ ಮತ್ತು ಹಾಲು ಉತ್ಪನ್ನಗಳನ್ನು ಪೂರೈಸುವುದಿಲ್ಲ ಎಂದು ಮುಷ್ಕರದ ನೇತೃತ್ವವನ್ನು ವಹಿಸಿರುವ,130 ರೈತ ಸಂಘಟನೆಗಳ ಒಕ್ಕೂಟವಾಗಿರುವ ರಾಷ್ಟ್ರೀಯ ಕಿಸಾನ್ ಮಹಾಸಂಘ (ಆರ್‌ಕೆಎಂ)ವು ಸ್ಪಷ್ಟಪಡಿಸಿದೆ. ರೈತರು ರಸ್ತೆತಡೆಗಳನ್ನು ನಡೆಸುವುದಿಲ್ಲ ಎಂದು ಭರವಸೆ ನೀಡಿರುವ ಅದು,ಆದರೆ ದೇಶದ 30 ಪ್ರಮುಖ ಹೆದ್ದಾರಿಗಳಲ್ಲಿ ಧರಣಿ ಕುಳಿತುಕೊಳ್ಳಲಿದ್ದಾರೆ ಎಂದು ತಿಳಿಸಿದೆ.

ಈ ಹಿಂದೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕನಿಷ್ಠ 35,000 ರೈತರು ರಾಜ್ಯ ಸರಕಾರಕ್ಕೆ ತಮ್ಮ ಬೇಡಿಕೆಗಳನ್ನು ಸಲ್ಲಿಸಲು ಮುಂಬೈಗೆ 180 ಕಿ.ಮೀ.ಗಳ ಕಾಲ್ನಡಿಗೆ ಜಾಥಾ ನಡೆಸಿದ್ದರು ಮತ್ತು ಸರಕಾರವು ಅವರ ಬೇಡಿಕೆಗಳನ್ನು ಒಪ್ಪಿಕೊಂಡಿತ್ತು. ಆದರೆ ರಾಜ್ಯದ ರೈತರೀಗ ರಾಷ್ಟ್ರವ್ಯಾಪಿ ‘ಗಾಂವ್ ಬಂದ್’ನ್ನು ಬೆಂಬಲಿಸುತ್ತಿದ್ದಾರೆ.

ಇದೀಗ ರಾಷ್ಟ್ರವ್ಯಾಪಿ ಪ್ರತಿಭಟನೆಯಾಗಿದೆ.ನಾವೀ ಪ್ರತಿಭಟನೆಗೆ ‘ಗಾಂವ್ ಬಂದ್’ಹೆಸರಿಟ್ಟಿದ್ದೇವೆ. ನಾವು ನಗರಗಳಿಗೆ ಹೋಗುವುದಿಲ್ಲ. ಸಾಮಾನ್ಯ ಜನಜೀವನವನ್ನು ವ್ಯತ್ಯಯಗೊಳಿಸಲು ನಾವು ಬಯಸುವುದಿಲ್ಲ. ಜೂ.10ರಂದು ಅಪರಾಹ್ನ ಎರಡು ಗಂಟೆಯವರೆಗೆ ಭಾರತ ಬಂದ್ ನಡೆಸಲು ನಾವುನಿರ್ಧರಿಸಿದ್ದೇವೆ ಎಂದು ಆರ್‌ಕೆಎಂ ಅಧ್ಯಕ್ಷ ಶಿವಕುಮಾರ ಶರ್ಮಾ ತಿಳಿಸಿದರು. ನಗರಗಳ ನಿವಾಸಿಗಳಿಗೆ ತರಕಾರಿ ಮತ್ತು ಹಾಲು ಉತ್ಪನ್ನಗಳನ್ನು ಖರೀದಿಸಬೇಕಿದ್ದರೆ ಅವರು ಗ್ರಾಮಗಳಿಗೆ ಹೋಗಬೇಕಾಗುತ್ತದೆ ಎಂದರು.

ಕಳೆದ ವರ್ಷದ ಜೂ.6ರಂದು ಮಧ್ಯಪ್ರದೇಶದ ಮಂದಸೌರ್‌ನಲ್ಲಿ ತಮ್ಮ ಬೆಳೆಗಳಿಗೆ ಉತ್ತಮ ಬೆಲೆಗಳು ಮತ್ತು ಸಾಲಮನ್ನಾ ಬೇಡಿಕೆಗಳನ್ನು ಮುಂದಿರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ನಡೆದಿದ್ದ ಪೊಲೀಸ್ ಗೋಲಿಬಾರ್‌ನಲ್ಲಿ ಆರು ರೈತರ ಸಾವುಗಳ ಮೊದಲ ವರ್ಷಾಚರಣೆಯ ಸಂದರ್ಭದಲ್ಲಿಯೇ ರೈತರು ಈ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ.

ಕಳೆದ ವರ್ಷದ ಘಟನೆ ಪುನರಾವರ್ತನೆಯಾಗಬಹುದು ಎಂಬ ಭೀತಿಯಲ್ಲಿರುವ ಮಂದಸೌರ್ ಜಿಲ್ಲಾಡಳಿತವು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಿದೆ. ಹಿಂಸಾಚಾರದಲ್ಲಿ ತೊಡಗುವುದಿಲ್ಲ ಎಂದು ಕೆಲವು ರೈತರಿಂದ ಮುಚ್ಚಳಿಕೆಗಳನ್ನು ಬರೆಸಿಕೊಳ್ಳಲಾಗಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top