ಅಗ್ನಿ ಅವಘಡದಲ್ಲಿ ನೀರವ್ ಮೋದಿ, ಮೆಹುಲ್ ಚೋಕ್ಸಿ ತನಿಖೆಯ ದಾಖಲೆಗಳು ನಾಶವಾಯಿತೇ?
ಐಟಿ ಇಲಾಖೆ ಹೇಳಿದ್ದೇನು?
ಹೊಸದಿಲ್ಲಿ, ಜೂ 3: ಮುಂಬೈನ ಕಚೇರಿಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ನೀರವ್ ಮೋದಿ ಹಾಗು ಮೆಹುಲ್ ಚೋಕ್ಸಿ ತನಿಖೆಗೆ ಸಂಬಂಧಿಸಿದ ದಾಖಲೆಗಳು ಸುಟ್ಟು ಭಸ್ಮವಾಗಿದೆ ಎನ್ನುವ ವರದಿಗಳನ್ನು ಆದಾಯ ತೆರಿಗೆ ಇಲಾಖೆ ನಿರಾಕರಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಇಲಾಖೆ, “ಐಟಿ ಕಚೇರಿಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ನೀರವ್ ಮೋದಿ/ಮೆಹುಲ್ ಚೋಕ್ಸಿ ತನಿಖೆಗೆ ಸಂಬಂಧಿಸಿದ ದಾಖಲೆಗಳು ನಾಶವಾಗಿದೆ ಎನ್ನುವ ವರದಿಗಳು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳಾಗಿದೆ” ಎಂದು ಹೇಳಿದೆ.
ಶುಕ್ರವಾರ ಮುಂಬೈಯ ಆದಾಯ ತೆರಿಗೆ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. “ಐದು ಅಗ್ನಿಶಾಮಕ ದಳದ ವಾಹನಗಳು, ನಾಲ್ಕು ನೀರಿನ ಟ್ಯಾಂಕ್ ಗಳು ಹಾಗು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story