ಸತತ ಏಳನೇ ದಿನವೂ ಇಳಿದ ಪೆಟ್ರೋಲ್ ಬೆಲೆ
ಹೊಸದಿಲ್ಲಿ,ಜೂ.5: ಜನಸಾಮಾನ್ಯರನ್ನು ಚಿಂತೆಗೀಡು ಮಾಡಿರುವ ಪೆಟ್ರೋಲ್ ಬೆಲೆ ಸತತ ಏಳನೇ ದಿನವಾದ ಮಂಗಳವಾರವೂ ಇಳಿಕೆಯಾಗಿದೆ. ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ಗೆ 13 ಪೈಸೆ ಮತ್ತು ಡೀಸಿಲ್ಗೆ 11 ಪೈಸೆ ಕಡಿತ ಮಾಡಲಾಗಿದೆ. ಇದರೊಂದಿಗೆ ಮಂಗಳವಾರ ಪ್ರತಿ ಲೀ.ಪೆಟ್ರೋಲ್ಗೆ ದಿಲ್ಲಿಯಲ್ಲಿ 77.83 ರೂ. ಮತ್ತು ಮುಂಬೈನಲ್ಲಿ 85.65 ರೂ.ಆಗಿತ್ತು.
ಕಳೆದ ಏಳು ದಿನಗಳಲ್ಲಿ ದಿಲ್ಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ನ ಬೆಲೆಯಲ್ಲಿ ಸುಮಾರು 60 ಪೈಸೆ ಇಳಿಕೆಯಾಗಿದ್ದರೆ,ವಿವಿಧ ನಗರಗಳಲ್ಲಿ ಡೀಸಿಲ್ ಬೆಲೆ ಪ್ರತಿ ಲೀ.ಗೆ 45 ಪೈಸೆ ಕಡಿಮೆಯಾಗಿದೆ.
Next Story