ಕಾರಿನಲ್ಲಿ ಬಂದು ಬೀದಿಯಲ್ಲಿ ನವಜಾತ ಶಿಶು ಎಸೆದ ಮಹಿಳೆ!
ಮುಝಫ್ಫರ್ಪುರ, ಜೂ.7: ಕಾರಿನಲ್ಲಿ ಬಂದ ಮಹಿಳೆಯೊಬ್ಬಳು ಬೀದಿಬದಿ ನವಜಾತ ಶಿಶುವನ್ನು ಎಸೆದುಹೋಗಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಮುಝಫ್ಫರ್ನಗರದಲ್ಲಿ ನಡೆದಿದೆ.
ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮಹಿಳೆಯೊಬ್ಬಳು ಸ್ಯಾಂಟ್ರೊ ಕಾರಿನಲ್ಲಿ ಬಂದು ಕಾರಿನ ಕಿಟಕಿ ಮೂಲಕ ಮಗುವನ್ನು ಕೆಳಗಿಟ್ಟುಹೋಗುವ ದೃಶ್ಯ ಸೆರೆಯಾಗಿದೆ.
ಮಗುವನ್ನು ರಕ್ಷಿಸಲಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
‘‘ನವಜಾತ ಹೆಣ್ಣುಮಗುವಿನ ಪರಿಸ್ಥಿತಿ ಗಂಭೀರವಾಗಿದೆ. ಮಗು ಚೇತರಿಸಿಕೊಳ್ಳುವ ವಿಶ್ವಾಸ ನಮಗಿದೆ’’ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿ ಹೇಳಿದ್ದಾರೆ.
#WATCH An unidentified woman drops a new-born baby on a street from a car in Muzaffarnagar. CMO Muzaffarnagar says, "the new-born is under treatment but her condition remains critical. We are hopeful of her recovery." (Source:CCTV footage) pic.twitter.com/Q6gyEAo6Q6
— ANI UP (@ANINewsUP) June 6, 2018