ಬಿಗಡಾಯಿಸಿದ ಕಫೀಲ್ ಖಾನ್ ಸಹೋದರ ಜಮೀಲ್ ಆರೋಗ್ಯ ಸ್ಥಿತಿ: ಲಕ್ನೋದ ಆಸ್ಪತ್ರೆಗೆ ದಾಖಲು
ಲಕ್ನೋ, ಜೂ.12: ದುಷ್ಕರ್ಮಿಗಳ ಗುಂಡೇಟಿನಿಂದ ಗಾಯಗೊಂಡಿರುವ ಡಾ.ಕಫೀಲ್ ಖಾನ್ ಸಹೋದರ ಕಾಶಿಫ್ ಜಮೀಲ್ ರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು, ಅವರನ್ನು ಲಕ್ನೋದ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಗೆ ದಾಖಲಿಸಲಾಗಿದೆ.
ಗೋರಖ್ ಪುರದ ಗೋರಖ್ ನಾಥ್ ನ ಜೆ ಪಿ ಆಸ್ಪತ್ರೆಯ ಸಮೀಪ ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಜಮೀಲ್ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ತೋಳು, ಕುತ್ತಿಗೆ ಹಾಗು ಗಲ್ಲಕ್ಕೆ ಬುಲೆಟ್ ತಗಲಿದ್ದು, ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಮಂಗಳವಾರ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ ಎಂದು ತಿಳಿದುಬಂದಿದೆ.
Next Story