ಕೇಜ್ರಿವಾಲ್ ಗೆ ಹಾರ್ದಿಕ್ ಪಟೇಲ್ ಬೆಂಬಲ
ಹೊಸದಿಲ್ಲಿ, ಜೂ.17: ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಜತೆ ಭಿನ್ನಾಭಿಪ್ರಾಯ ಹೊಂದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಬೆಂಬಲಿಸುವುದಾಗಿ ಪಟಿದಾರ್ ಮೀಸಲಾತಿ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ತಿಳಿಸಿದ್ದಾರೆ. ಪಕ್ಷ ಯಾವುದು ಎಂಬುದು ನನಗೀಗ ಮುಖ್ಯವಲ್ಲ. ಆದರೆ ಈ ಹೋರಾಟದಲ್ಲಿ ಕೇಜ್ರಿವಾಲ್ ಜೊತೆ ನಿಲ್ಲುತ್ತೇನೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಪ್ರತಿಯೊಬ್ಬರೂ ಸಂಘಟಿತರಾಗುವ ಅಗತ್ಯವಿದೆ ಎಂದು ಪಟೇಲ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಧರಣಿ ಮುಷ್ಕರ ನಡೆಸುತ್ತಿರುವ ಕೇಜ್ರಿವಾಲ್ ಗೆ ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ಕೇರಳ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳು ಬೆಂಬಲ ಸೂಚಿಸಿದ್ದಾರೆ.
Next Story