ಸಿಕ್ಕಿಂನ ಬ್ರಾಂಡ್ ಅಂಬಾಸಿಡರ್ ಆಗಿ ಎ.ಆರ್ ರಹಮಾನ್ ಆಯ್ಕೆ
ಗ್ಯಾಂಗ್ಟಕ್, ಜೂ.20: ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರಹಮಾನ್ರನ್ನು ಸಿಕ್ಕಿಂನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ. ರಹಮಾನ್ ಸಿಕ್ಕಿಂ ರಾಜ್ಯದ ಸಾಧನೆಗಳನ್ನು ರಾಷ್ಟ ಮತ್ತು ಜಾಗತಿಕ ಮಟ್ಟದಲ್ಲಿ ಪ್ರೋತ್ಸಾಹಿಸಲಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಎ.ಕೆ ಶ್ರೀವಾಸ್ತವ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ತನ್ನ ನೈಸರ್ಗಿಕ ಮತ್ತು ಪ್ರಾಚೀನ ಸೌಂದರ್ಯದಿಂದಾಗಿ ಕಳೆದ ಎರಡು ದಶಕಗಳಲ್ಲಿ ವಿಶ್ವ ಪ್ರಸಿದ್ಧ ಪರಿಸರ ಪ್ರವಾಸಿ ತಾಣವಾಗಿ ಬದಲಾಗಿದೆ. ಜೊತೆಗೆ ದೇಶದ ಪ್ರಥಮ ಸಂಪೂರ್ಣ ಸಾವಯವ ವ್ಯವಸಾಯ ನಡೆಸುವ ರಾಜ್ಯ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Next Story