ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡಿಯಲು ಎನ್ ಎಸ್ ಜಿ ಕಮಾಂಡೋಗಳ ಬಳಕೆ
ಹೊಸದಿಲ್ಲಿ, ಜೂ.22: ಉಗ್ರವಾದಿಗಳ ಅಟ್ಟಹಾಸದಿಂದ ತತ್ತರಿಸಿರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಸದೆ ಬಡಿಯಲು ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೋಗಳನ್ನು ಬಳಕೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.
ಈಗಾಗಲೇ ವಿಶೇಷ ಶಸ್ತ್ರಾಸ್ತ್ರಗಳೊಂದಿಗೆ ಎನ್ಎಸ್ಜಿ ತಂಡವೊಂದು ಶ್ರೀನಗರಕ್ಕೆ ತಲುಪಿದ್ದು, ಬಿಎಸ್ ಎಫ್ ಶಿಬಿರದಲ್ಲಿ ತರಬೇತಿ ನಿರತವಾಗಿದೆ. ತಂಡದಲ್ಲಿ ಸುಮಾರು 12 ಶಾರ್ಪ್ ಶೂಟರ್ ಗಳು ಇದ್ದಾರೆ ಎಂದು ತಿಳಿದು ಬಂದಿದೆ.
ವಿಮಾನ ಹೈಜಾಕ್ ವಿರುದ್ಧದ ಕಾರ್ಯಾಚರಣೆಯಲ್ಲಿ ನಿಪುಣರಾಗಿರುವ ಎನ್ ಎಸ್ ಜಿ ಕಮಾಂಡೋಗಳು ವಿಮಾನ ನಿಲ್ದಾಣದ ಬಳಿ ಇರುವ ಗಡಿ ಭದ್ರತಾ ಪಡೆಯ ಶಿಬಿರದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶತ್ರುಗಳನ್ನು ದೂರದಿಂದಲೇ ಗುರುತಿಸಿ ಹೊಡೆದುರುಳಿಸುವ ಸಾಮರ್ಥ್ಯವಿರುವ ಸ್ನೈಪರ್ಗಳು ಮನೆಯೊಳಗೆ ಅಡಗಿರುವ ಉಗ್ರರ ಮಾಹಿತಿ ಕಲೆ ಹಾಕುವ ವಿಶೇಷ ರೇಡಾರ್ಗಳನ್ನು ಹೊಂದಿದ್ದಾರೆ
Next Story