ಸೇನಾ ಮೇಜರ್ ಪತ್ನಿಯ ಕೊಲೆ ಪ್ರಕರಣ: ಮತ್ತೋರ್ವ ಮೇಜರ್ ಪೊಲೀಸ್ ವಶಕ್ಕೆ
ಹೊಸದಿಲ್ಲಿ, ಜೂ.24: ಸೇನಾ ಮೇಜರ್ ಒಬ್ಬರ ಪತ್ನಿಯ ಹತ್ಯೆಗೈದ ಆರೋಪದಲ್ಲಿ ಮತ್ತೋರ್ವ ಸೇನಾ ಮೇಜರ್ ರನ್ನು ಪೊಲೀಸರು ಉತ್ತರ ಪ್ರದೇಶದ ಮೀರತ್ ನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕತ್ತು ಸೀಳಿದ ಸ್ಥಿತಿಯಲ್ಲಿ ಸೇನಾ ಮೇಜರ್ ಪತ್ನಿಯ ಮೃತದೇಹ ದಿಲ್ಲಿಯ ಬ್ರಾರ್ ಸ್ಕ್ವಾರ್ ಸಮೀಪ ನಿನ್ನೆ ಪತ್ತೆಯಾಗಿತ್ತು.
ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಪೊಲೀಸರು ಮೃತದೇಹ ಪರಿಶೀಲಿಸಿದಾಗ ಕತ್ತು ಸೀಳಲ್ಪಟ್ಟಿರುವುದು ಪತ್ತೆಯಾಗಿತ್ತು.
Next Story