ಚಲಿಸುತ್ತಿದ್ದ ಕಾರಿನಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ
ಅಹ್ಮದಾಬಾದ್, ಜೂ. 29: ಚಲಿಸುತ್ತಿದ್ದ ಕಾರಿನಲ್ಲಿ 22 ಹರೆಯದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ, ಚಿತ್ರೀಕರಿಸಿ ಬ್ಲಾಕ್ಮೇಲ್ ಮಾಡಿದ ಘಟನೆ ಅಹ್ಮದಾಬಾದ್ನಲ್ಲಿ ನಡೆದಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸರಕಾರಿ ಸಹಾಯವಾಣಿ ಅಭಯಂ ಸಮಾಲೋಚನೆ ನಡೆಸಿ ದೂರು ದಾಖಲಿಸುವಂತೆ ಸೂಚಿಸಿದ ಬಳಿಕ ಯುವತಿ ಇಲ್ಲಿನ ಸೆಟಲೈಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಹ್ಮದಾಬಾದ್ನ ನಿವಾಸಿಗಳಾದ ವೃಷಭ ಮರು ಹಾಗೂ ಗೌರವ್ ದಾಲ್ಮೀಯ ಅವರನ್ನು ಪ್ರಧಾನ ಆರೋಪಿ ಎಂದು ಯುವತಿ ಗುರುತಿಸಿದ್ದಾರೆ. ಇದಲ್ಲದೆ ಯಾಮಿನಿ ನಾಯರ್ ಹಾಗೂ ಇನ್ನೋರ್ವ ಅಪರಿಚಿತ ಮಹಿಳೆ ಆರೋಪಿಗಳಿಗೆ ಬ್ಲಾಕ್ಮೇಲ್ ಮಾಡಲು ನೆರವು ನೀಡಿದರು ಎಂದು ಹೇಳಿದ್ದಾರೆ. ಯುವತಿ ಬೈಕ್ನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಎಸ್ಯುವಿ ವಾಹನದಲ್ಲಿ ಬಂದ ಆರೋಪಿಗಳು ನೆಹರೂ ನಗರದ ಸರ್ಕಲ್ನಲ್ಲಿ ಬೈಕ್ ಅನ್ನು ತಡೆದು ನಿಲ್ಲಿಸಿದರು. ಮುಖ ಮುಚ್ಚಿದ್ದ ಮೂವರು ವ್ಯಕ್ತಿಗಳು ಯುವತಿಯನ್ನು ಬಲವಂತದಿಂದ ಕಾರಿಗೆ ಹತ್ತಿಸಿಕೊಂಡರು. ಇಬ್ಬರು ಅತ್ಯಾಚಾರ ನಡೆಸಿದರು ಹಾಗೂ ಇನ್ನಿಬ್ಬರು ಆ ಘಟನೆ ಶೂಟ್ ಮಾಡಿದರು ಎಂದು ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ.