ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ನ ಬೆಲೆ ಏರಿಕೆ
ಹೊಸದಿಲ್ಲಿ, ಜೂ. 30: ಅಂತಾರಾಷ್ಟ್ರೀಯ ದರ ಏರಿಕೆ ಹಾಗೂ ರೂಪಾಯಿ ಮೌಲ್ಯದ ಕುಸಿತದ ಪರಿಣಾಮ ಶನಿವಾರ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಒಂದರ ಬೆಲೆಯಲ್ಲಿ ರೂ. 2.71 ಏರಿಕೆಯಾಗಿದೆ.
ಸಬ್ಸಿಡಿ ಸಹಿತ ಎಲ್ಪಿಜಿ ಬೆಲೆ ರೂ. 493.35ಕ್ಕೆ ಏರಿಕೆಯಾಗಿದ್ದು, ರವಿವಾರ (ಜುಲೈ 1) ಮಧ್ಯರಾತ್ರಿಯಿಂದ ಚಾಲ್ತಿಗೆ ಬರಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ನ ಹೇಳಿಕೆ ತಿಳಿಸಿದೆ.
ಹಿಂದಿನ ತಿಂಗಳ ವಿದೇಶಿ ವಿನಿಮಯ ದರ ಹಾಗೂ ಸರಾಸರಿ ಸಾಮಾನ್ಯ ದರದ ಆಧಾರದಲ್ಲಿ ತೈಲ ಕಂಪೆನಿಗಳು ಪ್ರತಿ ತಿಂಗಳ 1ನೇ ತಾರಿಕಿನಂದು ಬೆಲೆ ಪರಿಷ್ಕರಿಸುತ್ತವೆ. ಜಾಗತಿಕ ದರ ಏರಿಕೆಯಿಂದ ದಿಲ್ಲಿಯಲ್ಲಿ ಸಬ್ಸಿಡಿ ರಹಿತ ಎಲ್ಪಿಜಿಯ ಬೆಲೆ ಸಿಲಿಂಡರ್ ಒಂದಕ್ಕೆ ರೂ. 55.50 ಏರಿಕೆಯಾಗಿದೆ.
Next Story