ಈ ವಾರ ರೂಪಾಯಿ ಮೌಲ್ಯ 70ಕ್ಕೆ ಕುಸಿಯುವ ಸಾಧ್ಯತೆ: ತಜ್ಞರು
ಮುಂಬೈ, ಜು.8: ವಿದೇಶೀ ಬಂಡವಾಳ ಒಳಹರಿವಿನ ಕೊರತೆ ಮತ್ತು ಏರುತ್ತಿರುವ ತೈಲಬೆಲೆಯ ಪರಿಣಾಮವಾಗಿ ಈ ವಾರ ಡಾಲರ್ ವಿರುದ್ಧ ರೂಪಾಯಿ 70ಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ಬ್ಯಾಂಕಿಂಗ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರೂಪಾಯಿಗೆ 69.30 ಅತ್ಯಂತ ಸೂಕ್ಷ್ಮ ಮಟ್ಟವಾಗಿದ್ದು ಇದನ್ನು ದಾಟಿದರೆ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ 70ಕ್ಕೆ ಕುಸಿಯಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಜೂನ್ 28ರಂದು 69.10ಕ್ಕೆ ತಲುಪುವ ಮೂಲಕ ರೂಪಾಯಿ ಡಾಲರ್ ಎದುರು ಸರ್ವಕಾಲಿಕ ಕುಸಿತವನ್ನು ಕಂಡಿತ್ತು. ಗುರುವಾರದಂದು 68.95ಕ್ಕೆ ವ್ಯವಹಾರ ಮುಗಿಸಿದ ರೂಪಾಯಿ ಶುಕ್ರವಾರ 68.87ಕ್ಕೆ ಕೊನೆಯಾಗಿತ್ತು. ರೂಪಾಯಿಯ ನಿರಂತರ ಕುಸಿತದಿಂದ ಪಾರಾಗಲು ಆರ್ಬಿಐ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.
Next Story