ರಸ್ತೆ ನಿರ್ಮಾಣ ಸಂಸ್ಥೆಯ ಮೇಲೆ ಐಟಿ ದಾಳಿ; 170 ಕೋಟಿ ರೂ., 105 ಕೆ.ಜಿ. ಚಿನ್ನ ವಶ
ಚೆನ್ನೈ, ಜು.18: ತಮಿಳುನಾಡಿನ ರಾಜ್ಯ ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದ ಎಸ್ ಪಿಕೆ ಸಂಸ್ಥೆ ಮತ್ತು ಪಾಲುದಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಈ ವರೆಗೆ 170 ಕೋಟಿ ರೂ.ನಗದು, 105 ಕೆ.ಜಿ. ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಕಳೆದ ಎರಡು ದಿನಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಸ್ ಪಿಕೆ ಸಂಸ್ತೆಗೆ ಸೇರಿದ ಚೆನ್ನೈನಲ್ಲಿರುವ 17 ಮತ್ತು ವಿರುಧುನಗರ್ ಜಿಲ್ಲೆಯ 4 ಮತ್ತು ವೆಲ್ಲೂರು ಜಿಲ್ಲೆ 1 ಕಚೇರಿ ಸೇರಿದಂತೆ ಒಟ್ಟು 22 ಕಡೆಗಳಲ್ಲಿ ಐಟಿ ಅಧಿಖಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಹಣ ಹಾಗೂ ಚಿನ್ನಾಭರಣವನ್ನು ಬ್ಯಾಗ್ ನಲ್ಲಿ ತುಂಬಿಸಿ ಕಾರಿನಲ್ಲಿಡಲಾಗಿತ್ತು . ಈ ವೇಳೆ ಅಪಾರ ಪ್ರಮಾಣದಲ್ಲಿ ಚಿನ್ನದ ಬಿಸ್ಕತ್ ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
Next Story