ರಾಫೆಲ್ ಒಪ್ಪಂದ ಅಂಶ ಬಹಿರಂಗ ಅಸಾಧ್ಯ: ಫ್ರಾನ್ಸ್
ಹೊಸದಿಲ್ಲಿ, ಜು. 20: ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪವನ್ನು ತಳ್ಳಿ ಹಾಕಿರುವ ಫ್ರಾನ್ಸ್, ಒಪ್ಪಂದದ ಅಂಶಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಹೇಳಿದೆ. ರಫೇಲ್ ವ್ಯಾಪಾರದಲ್ಲಿ ಹೊಸದಿಲ್ಲಿ ಹಾಗೂ ಪ್ಯಾರಿಸ್ ನಡುವೆ ಯಾವುದೇ ರಹಸ್ಯ ಒಪ್ಪಂದ ಇಲ್ಲ ಎಂದು ಸಭೆಯೊಂದರಲ್ಲಿ ತನಗೆ ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ತಿಳಿಸಿರುವುದಾಗಿ ರಾಹುಲ್ ಗಾಂಧಿ ಲೋಕಸಭೆಯಲ್ಲಿ ತಿಳಿಸಿದ ಬಳಿಕ ಫ್ರಾನ್ಸ್ನ ಯುರೋಪ್ ಹಾಗೂ ವಿದೇಶ ವ್ಯವಹಾರಗಳ ಹೇಳಿಕೆ ತಿಳಿಸಿದೆ.
Next Story