ಮತಗಟ್ಟೆಯಲ್ಲಿ ಸ್ಫೋಟ: 31 ಸಾವು
ಇಸ್ಲಾಮಾಬಾದ್, ಜು. 25: ವಾಯುವ್ಯ ಪಾಕಿಸ್ತಾನದ ನಗರ ಕ್ವೆಟ್ಟಾದ ಜನಭರಿತ ಮತಗಟ್ಟೆಯೊಂದರ ಹೊರಗೆ ಬುಧವಾರ ಆತ್ಮಹತ್ಯಾ ಬಾಂಬರೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಾಗ 31 ಮಂದಿ ಮೃತಪಟ್ಟಿದ್ದಾರೆ ಹಾಗೂ 35 ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡ ಹಲವರ ಪರಿಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ.
ಮತದಾರರ ಗುಂಪೊಂದರ ಮೇಲೆ ಮೋಟರ್ ಸೈಕಲೊಂದು ನುಗ್ಗಿತು ಹಾಗೂ ಕ್ಷಣಗಳಲ್ಲಿ ದೊಡ್ಡ ಸ್ಫೋಟವೊಂದು ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಚುನಾವಣಾ ಪ್ರಚಾರ ಅವಧಿಯಲ್ಲೂ ಬಲೂಚಿಸ್ತಾನದಲ್ಲಿ ಭಾರೀ ಹಿಂಸಾಚಾರ ಸಂಭವಿಸಿತ್ತು. ಆತ್ಮಹತ್ಯಾ ದಾಳಿಯೊಂದರಲ್ಲಿ ಓರ್ವ ಅಭ್ಯರ್ಥಿ ಸೇರಿದಂತೆ 149 ಮಂದಿ ಮೃತಪಟ್ಟಿದ್ದರು.
Next Story