ಜಮ್ಮುವಿನಲ್ಲಿ ಶಂಕಿತ ಉಗ್ರನೊಬ್ಬ ಸಾಗಿಸುತ್ತಿದ್ದ 8 ಗ್ರೇನೆಡ್ ಗಳು ವಶಕ್ಕೆ
ಶ್ರೀನಗರ, ಆ.6: ಜಮ್ಮು ಮತ್ತು ಕಾಶ್ಮೀರದಲ್ಲಿ ಶಂಕಿತ ಉಗ್ರನೊಬ್ಬ ಬಸ್ ನಲ್ಲಿ ಕೊಂಡೊಯ್ಯುತ್ತಿದ್ದ 8 ಗ್ರೇನೆಡ್ ಗಳನ್ನು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ರವಿವಾರ ರಾತ್ರಿ ಗಾಂಧಿ ನಗರದಲ್ಲಿ ಪೊಲೀಸರು ಗುಪ್ತಚರ ಇಲಾಖೆಯಿಂದ ದೊರೆತ ಮಾಹಿತಿಯಂತೆ ಬಸ್ಸೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಶಂಕಿತ ಉಗ್ರನೊಬ್ಬನ ಕೈಯಲ್ಲಿ ಗ್ರೇನೆಡ್ ಗಳು ಪತ್ತೆಯಾಗಿವೆ.
ಪುಲ್ವಮಾ ಜಿಲ್ಲೆಯ ಗ್ರೇನೆಡ್ ಸಾಗಿಸುತ್ತಿದ್ದ ಅವಂತಿಪುರದ ನಿವಾಸಿ ಶಂಕಿತ ಉಗ್ರ ಅರ್ಫಾನ್ ವಾನಿ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಆತನ ಬಳಿಯಿದ್ದ ಹ್ಯಾಂಡ್ ಗ್ರೇನೆಡ್ ಗಳು ಮತ್ತು 60 ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ವೇಳೆ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಉಗ್ರರು ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸಿದ್ದಾರೆಂಬ ಮಾಹಿತಿಯನ್ನಾಧರಿಸಿ ಪೊಲೀಸರು ಮತ್ತು ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.
Next Story