ಕರ್ನಾಟಕ ಮುಕ್ತ ವಿವಿಗೆ ಯುಜಿಸಿ ಮ್ಯಾನತೆ
ಬೆಂಗಳೂರು, ಆ.10: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ( ಯುಜಿಸಿ) ಮಾನ್ಯತೆ ನೀಡಿದೆ.
2018-19ರಿಂದ 2022-2023 ಸಾಲಿಗೆ ವಿವಿಧ ಕೋರ್ಸ್ ಗಳನ್ನು ನಡೆಸಲು ಕರಾಮುವಿವಿಗೆ ಯುಜಿಸಿ ಅನುಮತಿ ನೀಡಿದೆ
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಹಾಗೂ ಯುಜಿಸಿ ಇದನ್ನು ದೃಢಪಡಿಸಿದ್ದು, 2018-19 ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯವು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನೀಡುವಂತೆ ಯುಜಿಸಿಗೆ ಶಿಫಾರಸ್ಸು ಮಾಡಿತ್ತು. ಅಧಿಕೃತ ಆದೇಶ ಬಂದ ಬಳಿಕ ಪ್ರವೇಶದ ಬಗ್ಗೆ ಸಾರ್ವಜನಿಕ ಅಧಿಸೂಚನೆಯನ್ನು ವಿವಿ ಹೊರಡಿಸಲಿದೆ.
ರಾಜ್ಯ ಮುಕ್ತ ವಿವಿಯಲ್ಲಿ 2015-16ನೇ ಸಾಲಿನಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ.
Next Story