ಸತತ ಐದನೇ ತಿಂಗಳು ಏರ್ ಇಂಡಿಯಾ ವೇತನ ವಿಳಂಬ
ಹೊಸದಿಲ್ಲಿ, ಆ. 10: ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ ಸತತ ಐದನೇ ತಿಂಗಳು ಕೂಡ ತನ್ನ ಸಿಬ್ಬಂದಿಗೆ ವೇತನ ವಿತರಿಸಲು ಮತ್ತೊಮ್ಮೆ ವಿಫಲವಾಗಿದೆ. ಈಗ ಸಿಬ್ಬಂದಿ ಜುಲೈ ತಿಂಗಳ ವೇತನಕ್ಕೆ ಕಾಯುತ್ತಿದ್ದಾರೆ. ನಿರಂತರ ಐದನೇ ತಿಂಗಳು ಕೂಡ ವೇತನ ವಿತರಿಸಲು ವಿಳಂಬವಾಗುತ್ತಿರುವುದು ಹತಾಶೆ ಉಂಟು ಮಾಡಿದೆ. ದೃಢೀಕರಣ ಹಾಗೂ ಭರವಸೆಯ ಹೊರತಾಗಿಯೂ ವೇತನ ಹಾಗೂ ಪ್ರಯಾಣ ಭತ್ಯೆ ವಿಳಂಬವಾಗುವುದಕ್ಕೆ ಸಂಬಂಧಿಸಿ ಉದ್ಯೋಗಿಗಳಿಗೆ ಮಾಹಿತಿ ನೀಡಲು ಆಡಳಿತ ಮಂಡಳಿ ವಿಫಲವಾಗಿದೆ ಎಂದು ಇಂಡಿಯನ್ ಕಮರ್ಷಿಯಲ್ ಪೈಲೆಟ್ಸ್ ಅಸೋಶಿಯೇಶನ್ನ ಕ್ಯಾ. ದೀಪಂಕರ್ ಗುಪ್ತಾ ಏರ್ ಇಂಡಿಯಾ ಆಡಳಿತ ನಿರ್ದೇಶಕ ಹಾಗೂ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
Next Story