ಕೊಚ್ಚಿ; ರನ್ವೇ ಬದಿಗೆ ಇಳಿದ ವಿಮಾನ: ತಪ್ಪಿದ ಅನಾಹುತ
ಕೊಚ್ಚಿ, ಆ. 14: ಇದ್ದಕ್ಕಿದ್ದಂತೆ ಸುರಿದ ಭಾರೀ ಮಳೆಯಿಂದ ದೃಗ್ಗೋಚರವಾಗದ ಹಿನ್ನೆಲೆಯಲ್ಲಿ 161 ಪ್ರಯಾಣಿಕರಿದ್ದ ಕುವೈತ್ ವಿಮಾನ ಮಂಗಳವಾರ ಮುಂಜಾನೆ ಇಲ್ಲಿನ ಅಂತಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇಯ ಬದಿಯಲ್ಲಿ ಇಳಿದಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಆದರೆ, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನ ಮುಂಜಾನೆ 4:20ಕ್ಕೆ ಇಳಿಯಿತು. ಆದರೆ ರನ್ವೇಯ ಬದಿಯಲ್ಲಿ ಇಳಿಯಿತು. ಇದರಿಂದ ಬದಿಯಲ್ಲಿದ್ದ ರನ್ವೇ ಲೈಟಗಳಿಗೆ ಹಾನಿ ಉಂಟಾಯಿತು. ಈ ಘಟನೆಯ ಹಿನ್ನೆಲೆಯಲ್ಲಿ ಕೆಲವು ನಿಮಿಷ ಕಾಲ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ರನ್ವೇ ಯನ್ನು ಸ್ವಚ್ಛಗೊಳಿಸಿ ಹಾಗೂ ಲೈಟ್ಗಳನ್ನು ಸರಿಪಡಿಸಿದ ಬಳಿಕ ವಿಮಾನಗಳ ಹಾರಾಟ ಆರಂಭಿಸಲಾಯಿತು ಎಂದು ಮೂಲಗಳು ತಿಳಿಸಿವೆ.
Next Story