ಒಂದೇ ಕುಟುಂಬದ ಐವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಫ್ರಿಜ್, ಕಪಾಟು, ಸೂಟ್ ಕೇಸ್ ನಲ್ಲಿ ಮೃತದೇಹಗಳು !
ಅಲಹಾಬಾದ್, ಆ.21: ಮೂವರು ಮಕ್ಕಳು ಸೇರಿ ಕುಟುಂಬದ ಐವರು ಸದಸ್ಯರು ಮನೆಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಲಹಾಬಾದ್ ನಲ್ಲಿ ಈ ಘಟನೆ ನಡೆದಿದೆ. ಪತಿಯ ಮೃತದೇಹ ಫ್ಯಾನ್ ನಲ್ಲಿ ನೇತಾಡುತ್ತಿದ್ದರೆ, ಪತ್ನಿಯ ದೇಹವು ಫ್ರಿಜ್ ಒಳಗಿತ್ತು ಎನ್ನಲಾಗಿದೆ.
ಈ ದಂಪತಿಯ ಮಕ್ಕಳು ಎಂದು ನಂಬಲಾದ ಇಬ್ಬರು ಹೆಣ್ಣುಮಕ್ಕಳ ಮೃತದೇಹ ಸೂಟ್ ಕೇಸ್ ಮತ್ತು ಕಪಾಟಿನಲ್ಲಿ ಪತ್ತೆಯಾಗಿದ್ದರೆ, ಮತ್ತೊಬ್ಬ ಪುತ್ರಿಯ ಮೃತದೇಹ ಇನ್ನೊಂದು ಕೋಣೆಯಲ್ಲಿ ಪತ್ತೆಯಾಗಿದೆ.
ಮನಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. “ಮನೋಜ್ ಕುಶ್ವಾಹ ಎಂಬ ಈ ವ್ಯಕ್ತಿ ಪತ್ನಿ ಮತ್ತು ಮೂರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Next Story