ಜಕಾರ್ತ, ಆ.21: ಇಂಡೋನೇಶ್ಯಾದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನಲ್ಲಿ ಭಾರತದ ಮಹಿಳಾ ಕುಸ್ತಿಪಟು ದಿವ್ಯಾ ಕಕ್ರನ್ ಕಂಚು ಬಾಚಿಕೊಂಡರು.
ಮಂಗಳವಾರ ನಡೆದ ಮಹಿಳೆಯರ 68 ಕೆ.ಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ದಿವ್ಯಾ ಅವರು ಚೀನಾ ತೈಪೆಯ ಚೆನ್ ವೆನ್ಲಿಂಗ್ ಅವರನ್ನು 10-0ರ ಅಂತರದಲ್ಲಿ ಸೋಲಿಸಿ ಕಂಚು ಪಡೆದರು.