ಫುಟ್ಬಾಲ್ ಕಿಕ್ ವೇಳೆ ಮುಗ್ಗರಿಸಿ ಬಿದ್ದ ಉಗಾಂಡ ಉಪ ಪ್ರಧಾನಿ!
ವೀಡಿಯೊ ವೈರಲ್
ಕಂಪಾಲ, ಆ.22: ಉಗಾಂಡದ ಮೊದಲ ಉಪ ಪ್ರಧಾನಮಂತ್ರಿಯೊಬ್ಬರು ಇತ್ತೀಚೆಗೆ ದೇಶದಲ್ಲಿ ನಡೆದ ಫುಟ್ಬಾಲ್ ಟೂರ್ನಮೆಂಟ್ನ ಉದ್ಘಾಟನೆಯ ವೇಳೆ ಫುಟ್ಬಾಲ್ ಕೌಶಲ್ಯವನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸಿದ ಬಿದ್ದ ಘಟನೆ ನಡೆದಿದೆ. ಈ ತಮಾಷೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.
ನಿವೃತ್ತ ಜನರಲ್ ಮೊಸೆಸ್ ಅಲಿ ಫುಟ್ಬಾಲ್ ಚೆಂಡನ್ನು ಒದೆಯುವ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಮುಗ್ಗರಿಸಿ ಬಿದ್ದರು. ತಕ್ಷಣವೇ ಅವರ ಸಮೀಪದಲ್ಲಿದ್ದ ಅಂಗರಕ್ಷಕರು ನೆರವಿಗೆ ಬಂದರು. ಆದರೆ, ಮುಗ್ಗರಿಸಿದ ಬಿದ್ದ ಘಟನೆಯು ಉಪ ಪ್ರಧಾನಿಗೆ ಮುಜುಗರ ಉಂಟು ಮಾಡಿತು. ಉಗಾಂಡದ ನಂಬೂಲ್ ನ್ಯಾಶನಲ್ ಸ್ಟೇಡಿಯಂನಲ್ಲಿ ರಾಷ್ಟ್ರೀಯ ಟೂರ್ನಮೆಂಟ್ನ ಉದ್ಘಾಟನೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ದೇಶದ ರೆಡಿಯೋ ಚಾನಲ್ ಗ್ಯಾಲಕ್ಸಿ ಎಫ್ಎಂ ತಿಳಿಸಿದೆ.
Next Story