1 ಕೆ.ಜಿ. ಚಹಾ ಹುಡಿಗೆ 40 ಸಾವಿರ ರೂ. !
ಗುವಾಹತಿ, ಆ. 24: ಗುವಾಹತಿಯಲ್ಲಿ ನಡೆದ ಚಹಾ ಹುಡಿ ಹರಾಜಿನಲ್ಲಿ ಅರುಣಾಚಲ ಪ್ರದೇಶದ ವಿಶೇಷ ಚಹಾ ಹುಡಿ ಜಗತ್ತಿನಲ್ಲೇ ದಾಖಲೆ ಬೆಲೆ ಪ್ರತಿ ಕೆ.ಜಿ. 40 ಸಾವಿರ ರೂ.ನಂತೆ ಮಾರಾಟವಾಗಿದೆ.
ಅರುಣಾಚಲ ಪ್ರದೇಶದ ದೋನಿ ಚಹಾ ಎಸ್ಟೇಟ್ನ ಗೋಲ್ಡನ್ ನೀಡಲ್ಸ್ ವಿಶೇಷ ಚಹಾ ಹುಡಿ ಪ್ರತಿ ಕೆ.ಜಿ.ಗೆ 40 ಸಾವಿರ ರೂಪಾಯಿಯಂತೆ ಮಾರಾಟವಾಗಿದೆ ಎಂದು ಗುವಾಹತಿ ಚಹಾ ಹರಾಜು ಖರೀದಿಗಾರರ ಅಸೋಶಿಯೇಷನ್ (ಜಿಟಿಎಸಿ)ನ ಕಾರ್ಯದರ್ಶಿ ದಿನೇಶ್ ಬಿಹಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ಜುಲೈಯಲ್ಲಿ ಅಸ್ಸಾಂನ ಚಹಾ ಹುಡಿ ಪ್ರತಿ ಕೆ.ಜಿ.ಗೆ 39.001 ರೂ.ಗೆ ಮಾರಾಟವಾಗಿತ್ತು.
‘‘ಈ ವಿಶೇಷ ಚಹಾ ಹುಡಿ ಹೆಚ್ಚು ಖರೀದಿಗಾರರು ಆಕರ್ಷಿಸುತ್ತಿದೆ. ಉತ್ಪಾದಕರು ಸಂಘಟಿತರಾಗಲು ಹಾಗೂ ಜಿಟಿಎಸಿಯನ್ನು ಬಳಸಲು ಅವಕಾಶ ಒದಗಿಸುತ್ತ್ತಿದೆ. ಈ ವಿಶೇಷ ಚಹಾ ಹುಡಿ ಜಗತ್ತಿನ ನಕಾಶೆಯಲ್ಲಿ ಕಳೆದ ಹೋದ ನಮ್ಮ ವೈಭವವನ್ನು ಮತ್ತೆ ತಂದು ಕೊಡಲಿದೆ ಎಂಬ ನಿರೀಕ್ಷೆ ನಮ್ಮದು’’ ಎಂದು ಬಿಹಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story