ಸೆ.4, 5ರಂದು ಆರ್ಬಿಐ ನೌಕರರ ಸಾಮೂಹಿಕ ರಜೆ
ಕೋಲ್ಕತಾ, ಆ.28: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.4 ಮತ್ತು 5ರಂದು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ಆರ್ಬಿಐ ನೌಕರರಿಗೆ ರಿಸರ್ವ್ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರ ಸಂಯುಕ್ತ ಒಕ್ಕೂಟ(ಯುಎಫ್ಆರ್ಬಿಒಇ) ಕರೆ ನೀಡಿದೆ.
ಚಂದಾ ಭವಿಷ್ಯನಿಧಿ ಹೊಂದಿರುವ ನೌಕರರು ಪಿಂಚಣಿ ಯೋಜನೆಗೆ ಬದಲಾಯಿಸುವ ಆಯ್ಕೆ ನೀಡಬೇಕು ಹಾಗೂ 2012ರಿಂದ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡವರಿಗೆ ಹೆಚ್ಚುವರಿ ಪ್ರಾವಿಡೆಂಟ್ ಫಂಡ್ ನೀಡಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ದಿನ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ.
2017ರ ಅಕ್ಟೋಬರ್ನಲ್ಲಿ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಬರೆದಿರುವ ಪತ್ರವನ್ನು ಸರಕಾರ ಅನೌಪಚಾರಿಕವಾಗಿ ತಳ್ಳಿಹಾಕಿದೆ ಎಂದು ಅಖಿಲ ಭಾರತ ಆರ್ಬಿಐ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಮೀರ್ ಘೋಷ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
Next Story