ಉತ್ತರಾಖಂಡ: ಭೂಕುಸಿತದಿಂದ ಮನೆ ನೆಲಸಮ, 4 ಬಲಿ
ಮಣ್ಣಿನ ರಾಶಿಯಡಿ 8 ಮಂದಿ ಸಿಲುಕಿರುವ ಶಂಕೆ
ಡೆಹ್ರಾಡೂನ್, ಆ.29: ಉತ್ತರಾಖಂಡದಲ್ಲಿ ಸಂಭವಿಸಿರುವ ಭೂಕುಸಿತದಿಂದ ಮನೆಯೊಂದು ನೆಲಸಮವಾದ ಘಟನೆ ನಡೆದಿದೆ. ದುರಂತದಲ್ಲಿ ನಾಲ್ಕು ಮಂದಿ ಬಲಿಯಾಗಿದ್ದು ಮಣ್ಣಿನ ರಾಶಿಯಡಿ ಇನ್ನೂ 8 ಮಂದಿ ಸಿಲುಕಿರುವ ಶಂಕೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡದ ಕೋಟ್ ಗ್ರಾಮದ ಬುದ ಕೇದರ್ ಎಂಬ ಪ್ರದೇಶದಲ್ಲಿ ಘಟನೆ ನಡೆದಿದೆ. ಮನೆಯ ಮೇಲೆ ಗುಡ್ಡ ಕುಸಿದು ಮನೆಯಲ್ಲಿದ್ದ ನಾಲ್ವರು ಮೃತರಾಗಿದ್ದಾರೆ. ಅವಶೇಷಗಳಡಿ ಇನ್ನೂ 8 ಮಂದಿ ಸಿಲುಕಿರುವರೆಂದು ಶಂಕಿಸಲಾಗಿದ್ದು ರಾಜ್ಯದ ವಿಪತ್ತು ನಿರ್ವಹಣಾ ತಂಡವು ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story